ಕುಪ್ನಳ್ಳಿ ಎಂ. ಬೈರಪ್ಪ (ಆಂಗ್ಲ: . ), ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ. ಗದ್ಯ, ಪದ್ಯ, ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಇವರು, ಕೇಂದ್ರ ಸರ್ಕಾರವು 'ರಾಷ್ಟ್ರಪತಿ ಪುರಸ್ಕಾರ'ದ ಭಾಗವಾಗಿ ಯುವ ವಿದ್ವಾಂಸರಿಗೆ ನೀಡುವ, ರಾಷ್ಟ್ರೀಯ ಪುರಸ್ಕಾರವಾದ ‛ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ’ಕ್ಕೆ ಭಾಜನರಾದ ಅತಿ ಕಿರಿಯ ವಿದ್ವಾಂಸರಾಗಿದ್ದಾರೆ. == ಕೃತಿಗಳು == ಭೈರಪ್ಪ ಅವರ ಸಾಹಿತ್ಯ ಕೃಷಿ ಹಲವಾರು ಕ್ಷೇತ್ರಗಳಲ್ಲಿ ನಡೆದಿದೆ. ಈವರೆಗೆ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ಬರೆದಿರುವ ಅವರು ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಅವರ ಮೊದಲ ಕವನ ಸಂಕಲನ ಬೇಲಿ ಗಿಡಗಳು ಮಾತಾಡುತಾವೆ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಬಹುಮಾನ ಪಡೆದಿತ್ತು. ಬೇಲಿಗಿಡಗಳು ಮಾತಾಡುತಾವೆ ಕರ್ಣರಸಾಯನ ಅಂತರಗಂಗವ್ವ ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ ಬಸವ ಸಿನಿಮಾ ಬುದ್ಧ ಪ್ರತಿಮಾ ಬೌದ್ಧಯಾನಿ ಚಾಮುಂಡಿ ಜನಮುಖಿ: ಪ್ರೊ. ಎಲ್. ಬಸವರಾಜು ಅವರ ಕೃತಿಶೋಧ ಕತ್ತಲನಾಡಿನ ಬೆಳಕಿನ ಹಾಡು ಮೈಸೂರು-ಚಾಮರಾಜನಗರ ತತ್ತ್ವಪದಗಳು ಬುದ್ಧನಗೆಯ ತಾಯಿನದಿ ಹರಿಶ್ಚಂದ್ರ ಕಾವ್ಯ: ಸಾಂಸ್ಕೃತಿಕ ವಿವೇಚನೆ ಸಮತಾ ಪಂಜು: ಸಾವಿತ್ರಿಬಾಯಿ ಫುಲೆ ಅವರ ಜೀವನಕ್ರಾಂತಿ ದರ್ಶನದ ಲೇಖನಗಳು (ಸಂಪಾದನೆ, ಪಿ. ಎನ್. ಹೇಮಲತಾ ಅವರೊಡನೆ) ಮುಂತಾದವು. == ಪುರಸ್ಕಾರಗಳು == ೨೦೧೯ - ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ ರಾಷ್ಟ್ರೀಯ ಪುರಸ್ಕಾರ ಪ್ರೊ. ಎಲ್. ಬಸವರಾಜು ಸ್ಮಾರಕ ಸಂಶೋಧನಾ ಬಹುಮಾನ ಹಾ. ಮಾ. ನಾಯಕ ದತ್ತಿ ಪುರಸ್ಕಾರ ಲೋಹಿಯಾ ಸಮತಾ ಪುರಸ್ಕಾರ ೨೦೧೯ - ಚೈತನ್ಯ ಫೌಂಡೇಶನ್ ಪ್ರಶಸ್ತಿ ೨೦೧೯ - ಪ್ರಜಾವಾಣಿ ಯುವ ಸಾಧಕ ಪುರಸ್ಕಾರ ೨೦೨೧ - ಯುವ ಸಾಹಿತ್ಯ ಕಣ್ಮಣಿ ಕಸಾಪ ದತ್ತಿ ಪ್ರಶಸ್ತಿ == ಉಲ್ಲೇಖಗಳು ==